ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌

ಅಧ್ಯಯನ, ಧ್ಯಾನ ಮತ್ತು ಸ್ಫೂರ್ತಿಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಸಂಗಾತಿ

ವೈಎಸ್‌ಎಸ್-ಎಸ್ಆರ್‌ಎಫ್ ಆ್ಯಪ್ ಪರಿಚಯಾತ್ಮಕ ವೀಡಿಯೊ

ನಿಮ್ಮ ಆಧ್ಯಾತ್ಮಿಕ ಪಯಣಕ್ಕೆ ನೆರವಾಗುವ ಡಿಜಿಟಲ್ ಸಂಪನ್ಮೂಲ

ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಆತ್ಮದ ಶಾಂತಿ, ಆನಂದ ಮತ್ತು ಜ್ಞಾನವನ್ನು ಜಾಗೃತಗೊಳಿಸುವ, ಜೀವನವನ್ನೇ ಪರಿವರ್ತಿಸಬಲ್ಲ ಅನುಭವವನ್ನು ಪಡೆಯಿರಿ.

ವೈಎಸ್‌ಎಸ್/ಎಸ್ಆರ್‌ಎಫ್ ಆ್ಯಪ್ ಎಲ್ಲರಿಗೂ ಉಪಯುಕ್ತವಾಗಿದೆ — ಪರಮಹಂಸ ಯೋಗಾನಂದರ ಬೋಧನೆಗಳಿಗೆ ನೀವು ಈಗಷ್ಟೇ ಪರಿಚಿತರಾಗಿರಲಿ ಅಥವಾ ದಶಕಗಳಿಂದ ಈ ಮಹಾನ್ ಗುರುವಿನ ಜ್ಞಾನದಲ್ಲಿ ಆಳವಾಗಿ ತೊಡಗಿಸಿಕೊಂಡಿರಲಿ. ಧ್ಯಾನ, ಕ್ರಿಯಾಯೋಗದ ವಿಜ್ಞಾನ ಮತ್ತು ಆಧ್ಯಾತ್ಮಿಕವಾಗಿ ಸಮತೋಲಿತ ಜೀವನವನ್ನು ನಡೆಸಲು ಅನುಸರಿಸಬಹುದಾದ ಪ್ರಾಯೋಗಿಕ ಮಾರ್ಗಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಎಲ್ಲರಿಗೂ ಇದು ಸೂಕ್ತವಾಗಿದೆ.

ವೈಶಿಷ್ಟ್ಯಗಳು:

  • ಶಾಂತಿ, ನಿರ್ಭೀತ ಜೀವನ, ಬೆಳಕಿನ ರೂಪದಲ್ಲಿ ದೈವ, ಪ್ರಜ್ಞೆಯ ವಿಸ್ತರಣೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಮಾರ್ಗದರ್ಶಿತ ಧ್ಯಾನಗಳು — ನಿಮ್ಮ ಅನುಕೂಲಕ್ಕೆ ತಕ್ಕಂತೆ 15 ರಿಂದ 45 ನಿಮಿಷಗಳವರೆಗೆ ಧ್ಯಾನದ ಅವಧಿಯನ್ನು ಹೊಂದಿಸಿಕೊಳ್ಳುವ ಸೌಲಭ್ಯದೊಂದಿಗೆ.
  • ನೇರ ಆನ್‌ಲೈನ್ ಧ್ಯಾನಗಳಲ್ಲಿ ಉಚಿತವಾಗಿ ಭಾಗವಹಿಸುವ ಅವಕಾಶ
  • ವೈಎಸ್‌ಎಸ್/ಎಸ್ಆರ್‌ಎಫ್ ಸುದ್ದಿ ಮತ್ತು ಕಾರ್ಯಕ್ರಮಗಳ ಮಾಹಿತಿ

ವೈಎಸ್‌ಎಸ್/ಎಸ್ಆರ್‌ಎಫ್ ಪಾಠಗಳ ವಿದ್ಯಾರ್ಥಿಗಳಿಗೆ…

ಈ ಆ್ಯಪ್ ನಿಮ್ಮ ಪಾಠಗಳ ಡಿಜಿಟಲ್ ಆವೃತ್ತಿಗಳೊಂದಿಗೆ, ವೈಎಸ್‌ಎಸ್/ಎಸ್ಆರ್‌ಎಫ್ ಕ್ರಿಯಾಯೋಗದ ಬೋಧನೆಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುವ ವೈವಿಧ್ಯಮಯ ಮಲ್ಟಿಮೀಡಿಯಾ ವಿಷಯಗಳನ್ನು ಒಳಗೊಂಡಿದೆ.

ಇವು ಸೇರಿವೆ:

  • ಪರಮಹಂಸ ಯೋಗಾನಂದರ ಧ್ವನಿ ಮುದ್ರಣಗಳು
  • ವೈಎಸ್‌ಎಸ್/ಎಸ್ಆರ್‌ಎಫ್ ಸಂನ್ಯಾಸಿಗಳು ನಡೆಸಿಕೊಡುವ ಮಾರ್ಗದರ್ಶಿತ ಧ್ಯಾನಗಳು ಮತ್ತು ದೃಶ್ಯೀಕರಣಗಳು
  • ವೈಎಸ್‌ಎಸ್/ಎಸ್ಆರ್‌ಎಫ್ ಧ್ಯಾನ ತಂತ್ರಗಳ ಕುರಿತಾದ ತರಗತಿಗಳು
  • ವೈಎಸ್‌ಎಸ್/ಎಸ್ಆರ್‌ಎಫ್ ಚೈತನ್ಯದಾಯಕ ವ್ಯಾಯಾಮಗಳ ಕುರಿತು ಹಂತ-ಹಂತದ ವೀಡಿಯೋ ಸೂಚನೆಗಳು

 
ನೀವು ವೈಎಸ್‌ಎಸ್/ಎಸ್ಆರ್‌ಎಫ್ ಪಾಠಗಳ ವಿದ್ಯಾರ್ಥಿಯಾಗಿದ್ದರೆ, ಆ್ಯಪ್‌ನಲ್ಲಿ ಪಾಠಗಳನ್ನು ತೆರೆಯಲು ದಯವಿಟ್ಟು ನಿಮ್ಮ ಪರಿಶೀಲಿತ ಖಾತೆಯ ವಿವರಗಳನ್ನು ಬಳಸಿ.

ವೈಎಸ್‌ಎಸ್/ಎಸ್ಆರ್‌ಎಫ್ ಕುರಿತು

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) ಮತ್ತು ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ಎಸ್ಆರ್‌ಎಫ್), ಆಧ್ಯಾತ್ಮಿಕ ಅನ್ವೇಷಕರಿಗೆ ಆತ್ಮದ ಅನ್ವೇಷಣೆಯ ಮೂಲಕ ಜೀವನವನ್ನೇ ಪರಿವರ್ತಿಸಬಲ್ಲ ಪಯಣದಲ್ಲಿ ಜೊತೆಯಾಗಿ ಸಾಗಲು ಆಹ್ವಾನ ನೀಡುತ್ತವೆ. ಈ ಪಯಣವು ಪರಮಹಂಸ ಯೋಗಾನಂದರ “ಬದುಕುವುದು ಹೇಗೆ ” ಎಂಬ ಬೋಧನೆಗಳನ್ನು ಒಳಗೊಂಡಿದೆ. ಈ ಬೋಧನೆಗಳು ನಾವು ನಿಜವಾಗಿಯೂ ಯಾರು ಎಂಬುದನ್ನು ಅರಿತುಕೊಳ್ಳಲು ಅತ್ಯುನ್ನತ ತಂತ್ರಗಳನ್ನು ತಿಳಿಸುವುದರ ಜೊತೆಗೆ, ನಮ್ಮ ಜೀವನದಲ್ಲಿ ಮತ್ತು ಜಗತ್ತಿನಲ್ಲಿ ಶಾಶ್ವತ ಶಾಂತಿ, ಆನಂದ ಹಾಗೂ ಪ್ರೀತಿಯನ್ನು ಹೇಗೆ ತರಬಹುದು ಎಂಬುದನ್ನೂ ತೋರಿಸುತ್ತವೆ. ವೈಎಸ್‌ಎಸ್ ಮತ್ತು ಎಸ್ಆರ್‌ಎಫ್ ಸಂಸ್ಥೆಗಳ ಗುರಿಯು ಕೇವಲ ತಾತ್ತ್ವಿಕ ಅಧ್ಯಯನದ ಪಠ್ಯಕ್ರಮವನ್ನು ಒದಗಿಸುವುದಲ್ಲ; ಬದಲಾಗಿ, ಆಧುನಿಕ ಯುಗದ ಮಹಾನ್ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಪರಮಹಂಸ ಯೋಗಾನಂದರ ಜೀವಂತ ನುಡಿಗಳ ಮೂಲಕ ಪವಿತ್ರ ಜ್ಞಾನವನ್ನು ನೈಜವಾಗಿ ಪ್ರಸಾರ ಮಾಡುವುದಾಗಿದೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾವನ್ನು ಪರಮಹಂಸ ಯೋಗಾನಂದರು 1917 ರಲ್ಲಿ ಸ್ಥಾಪಿಸಿದರು. ಕ್ರಿಯಾಯೋಗದ ಬೋಧನೆಗಳನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ಪರಮಹಂಸ ಯೋಗಾನಂದರು 1920 ರಲ್ಲಿ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ ಅನ್ನು ಸ್ಥಾಪಿಸಿದರು.

ಎಸ್ಆರ್‌ಎಫ್ / ವೈಎಸ್‌ಎಸ್ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌

ವೈಎಸ್‌ಎಸ್/ಎಸ್ಆರ್‌ಎಫ್ ಆ್ಯಪ್‌ನಲ್ಲಿ ವೈಎಸ್‌ಎಸ್ ಪಾಠಗಳ ವಿದ್ಯಾರ್ಥಿಗಳು ತಮ್ಮ ಡಿವೋಟೀ ಪೋರ್ಟಲ್‌ನ ಖಾತೆಯ ವಿವರಗಳನ್ನು ಬಳಸಿ ಲಾಗಿನ್ ಆಗಿ, ತಾವು ಚಂದಾದಾರರಾಗಿರುವ ಭಾಷೆಗಳಲ್ಲಿ ಪಾಠಗಳನ್ನು ವೀಕ್ಷಿಸಬಹುದು. ಪಾಠಗಳ ವಿದ್ಯಾರ್ಥಿಗಳಾಗಿರಲಿ ಅಥವಾ ಇಲ್ಲದಿರಲಿ, ಎಲ್ಲ ಬಳಕೆದಾರರೂ ಆನ್‌ಲೈನ್ ಧ್ಯಾನಗಳು, ಮಾರ್ಗದರ್ಶಿತ ಧ್ಯಾನಗಳು, ವೈಎಸ್‌ಎಸ್ ಸುದ್ದಿ ಮತ್ತು ಬ್ಲಾಗ್ ಲೇಖನಗಳಂತಹ ಇತರ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಬಹುದು.

ಪಾಠಗಳ ಡಿಜಿಟಲ್ ಆವೃತ್ತಿಯನ್ನು ಹೆಚ್ಚುವರಿ ಸಂಪನ್ಮೂಲವಾಗಿ ಒದಗಿಸಲಾಗಿದೆಯೇ ಹೊರತು, ಮುದ್ರಿತ ಪಾಠಗಳಿಗೆ ಪರ್ಯಾಯವಾಗಿ ಅಲ್ಲ. ಮುದ್ರಿತ ಆವೃತ್ತಿಯೊಂದಿಗೆ ವಿವೇಚನೆಯಿಂದ ಬಳಸಿದಾಗ, ಪಾಠಗಳ ಡಿಜಿಟಲ್ ಆವೃತ್ತಿಯು ವಿದ್ಯಾರ್ಥಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ವೈಎಸ್‌ಎಸ್ ಪಾಠಗಳಲ್ಲಿ ಅಂತರ್ಗತವಾಗಿರುವ ಸತ್ಯಗಳನ್ನು ಮತ್ತು ದೈವಿಕ ಪ್ರಜ್ಞೆಯನ್ನು ಅಧ್ಯಯನ ಮಾಡಲು, ಅವನ್ನು ಅಂತರೀಕರಿಸಿಕೊಳ್ಳಲು ಹಾಗೂ ಆ ಮೂಲಕ ಆಧ್ಯಾತ್ಮಿಕ ಪರಿವರ್ತನೆ ಹೊಂದಲು ಅತ್ಯುತ್ತಮವಾಗಿ ನೆರವಾಗುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿವೇಚನೆಯನ್ನು ಬಳಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಈ ಆ್ಯಪ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳು:

  • ನಮ್ಮ ಹೊಸ ಇ-ರೀಡರ್‌ನಲ್ಲಿ ಪಾಠಗಳನ್ನು ಓದಿ. ಇದರಲ್ಲಿ ಪಠ್ಯವನ್ನು ಧ್ವನಿಯಾಗಿ ಕೇಳುವ ಸೌಲಭ್ಯ, ಅಡ್ಡಲಾಗಿ ಪರದೆಯ ಮೇಲೆ ಓದುವ ಅನುಕೂಲ, ಪಠ್ಯವನ್ನು ವಿವಿಧ ಬಣ್ಣಗಳಲ್ಲಿ ಗುರುತಿಸುವ ಸೌಲಭ್ಯ, ಪದಗಳ ಅರ್ಥವನ್ನು ಹುಡುಕುವ ಅವಕಾಶ, ಫ್ಲ್ಯಾಶ್‌ಕಾರ್ಡ್‌ಗಳನ್ನು ರಚಿಸುವ ಸೌಲಭ್ಯ ಮತ್ತು ಇನ್ನೂ ಅನೇಕ ಸುಧಾರಿತ ವೈಶಿಷ್ಟ್ಯಗಳಿವೆ!
  • ನಿಮ್ಮ ನಿರ್ದಿಷ್ಟ ಅಗತ್ಯಗಳು ಮತ್ತು ಆಸಕ್ತಿಗಳಿಗೆ ಅನುಗುಣವಾದ ಮಾರ್ಗದರ್ಶನವನ್ನು ಸುಲಭವಾಗಿ ಪಡೆಯಲು, ವಿಷಯವಾರು ಪೂರಕ ಪಾಠಗಳನ್ನು ವೀಕ್ಷಿಸಿ.
  • ನಮ್ಮ ಡೆಸ್ಕ್‌ಟಾಪ್ ಬ್ರೌಸರ್ ರೀಡರ್ study.staging4.yssofindia.org ಅನ್ನು ಬಳಸಿ. ಇದು ಮೊಬೈಲ್ ಆ್ಯಪ್‌ನಲ್ಲಿನ ನಿಮ್ಮ ಓದಿನ ಸ್ಥಾನ, ಬುಕ್‌ಮಾರ್ಕ್‌ಗಳು ಮತ್ತು ಗುರುತಿಸಲಾದ ಪಠ್ಯವನ್ನು ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡುತ್ತದೆ.
  • ವೈಎಸ್‌ಎಸ್‌ನ ಇತ್ತೀಚಿನ ಸುದ್ದಿ ಮತ್ತು ಬ್ಲಾಗ್ ಬರಹಗಳ ಕುರಿತು ತಿಳಿದುಕೊಳ್ಳುತ್ತಿರಿ.
  • ಆ್ಯಪ್‌ನಿಂದಲೇ ದೈನಂದಿನ ಆನ್‌ಲೈನ್ ಧ್ಯಾನಗಳಲ್ಲಿ ಭಾಗವಹಿಸಿ.
  • ವಿವಿಧ ವಿಷಯಗಳ ಕುರಿತ ಮಾರ್ಗದರ್ಶಿತ ಧ್ಯಾನಗಳ ಅನುಭವ ಪಡೆಯಿರಿ. ಈಗ ನಿಮ್ಮ ವೇಳಾಪಟ್ಟಿಗೆ ಅನುಗುಣವಾಗಿ ವಿವಿಧ ಅವಧಿಗಳ ಧ್ಯಾನಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.

ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಕೆಳಗಿನ ಎಫ್‌ಎಕ್ಯೂ ನಿರ್ದಿಷ್ಟವಾಗಿ ವೈಎಸ್‌ಎಸ್‌ ಆಪ್‌ಗೆ ಸಂಬಂಧಪಟ್ಟಿದೆ. ವೈಎಸ್‌ಎಸ್‌ ಸರ್ವಾನ್ವಯ ಎಫ್‌ಎಕ್ಯೂಗಾಗಿ ನೀವು ನೋಡುತ್ತಿದ್ದಲ್ಲಿ, ದಯವಿಟ್ಟು ಇಲ್ಲಿ ಒತ್ತಿ.

ಬೆಂಬಲಿತ ಸಾಧನಗಳು ಮತ್ತು ಭಾಷೆಗಳು

ಯಾವ ರೀತಿಯ ಸಾಧನಗಳನ್ನು ಬೆಂಬಲಿಸಲಾಗುತ್ತಿದೆ?

ಪ್ರಸ್ತುತದಲ್ಲಿ ಆಪ್‌ ಅನ್ನು ಆಂಡ್ರಾಯ್ಡ್‌ ಮತ್ತು ಐಓಎಸ್‌ ಪ್ಲಾಟ್‌ಫಾರಂ ಮೇಲೆ ಮಾತ್ರ ನೀಡಲಾಗುತ್ತಿದೆ, ಮತ್ತು ಪಾಠಗಳು ಡೆಸ್ಕ್‌ಟಾಪ್‌ ಬ್ರೌಸರ್‌ಗಳ ಮೇಲೂ ಲಭ್ಯವಿವೆ.

  • ಆಂಡಾಯ್ಡ್‌ ಆಪ್‌ನ ಅವಶ್ಯಕತೆ:
    • ಆಂಡ್ರಾಯ್ಡ್‌ ಆವೃತ್ತಿ 7.0 ಮತ್ತು ಮೇಲಿನದು
    • ಸಾಧನದ ಮೇಲೆ ಪ್ರತಿಷ್ಠಾಪಿಸಿದ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಗೂಗಲ್‌ ಪ್ಲೇ ಸೇವೆಗಳು
  • ಐಓಎಸ್‌ ಆಪ್‌ನ ಅಗತ್ಯತೆಗಳು:
    • ಐಓಎಸ್‌ ಆವೃತ್ತಿ 17.4 ಮತ್ತು ಮೇಲಿನದು
  • ಡೆಸ್ಕ್‌ಟಾಪ್‌ ಬ್ರೌಸರ್‌ನ ಅಗತ್ಯತೆಗಳು:
    • ಎಲ್ಲ ಪ್ರಧಾನ ಬ್ರೌಸರ್‌ಗಳು: ಕ್ರೋಮ್‌, ಸಫಾರಿ, ಫೈರ್‌ಫಾಕ್ಷ್‌, ಮೈಕ್ರೋಸಾಫ್ಟ್‌ ಎಡ್ಜ್‌

 

ಪ್ರಸ್ತುತ ಸಮಯದಲ್ಲಿ ಈ ಕೆಳಗಿನ ಸಾಧನಗಳಿಗೆ ಬೆಂಬಲವಿಲ್ಲ:

  • ಅಮೇಜಾನ್‌ ಫೈರ್‌ ಟ್ಯಾಬ್ಲೆಟ್ಸ್‌
  • ಆಂಡ್ರಾಯ್ಡ್‌ ಇನ್ಸ್‌ಟೆಂಟ್‌ ಆಪ್ಸ್‌
  • ಗೂಗಲ್‌ ಕ್ರೋಮ್‌ಬುಕ್‌ ಆಪ್ಸ್‌

ನನ್ನ ಕಂಪ್ಯೂಟರ್‌ ಅಥವಾ ವಿಂಡೋಸ್‌ ಸಾಧನದ ಮೇಲೆ ನಾನು ಪಾಠಗಳನ್ನು ಓದಬಹುದೆ?

ಓದಬಹುದು! ವಿದ್ಯಾರ್ಥಿಗಳು ತಮ್ಮ ಡಿವೋಟೀ ಪೋರ್ಟಲ್‌ ವಿವರಗಳನ್ನು ನೀಡಿ ಲಾಗಿನ್‌ ಆಗಿ study.staging4.yssofindia.org ನಲ್ಲಿ ಅವರ ಪಾಠಗಳನ್ನು ಓದಬಹುದು.

ಯಾವ ಯಾವ ಭಾಷೆಗಳನ್ನು ಬೆಂಬಲಿಸುತ್ತದೆ?

ಆಪ್‌ನ ಭಾಷೆ: ಎಸ್‌ಆರ್‌ಎಫ್‌/ವೈಎಸ್‌ಎಸ್‌ ಅಪ್ಲಿಕೇಶನ್ ಪ್ರಸ್ತುತ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ಯೂಸರ್‌ ಇಂಟರ್‌ಫೇಸ್‌ ಮತ್ತು ಎಲ್ಲ ಪಠ್ಯೇತರ ವಿಷಯಗಳನ್ನು ನಿಮ್ಮ ಭಾಷೆಯಲ್ಲಿ ಓದಲು ‘ಫಾರ್‌ ಮಿ’ಯಲ್ಲಿ ಇರುವ ‘ಆಪ್‌ ಲಾಂಗ್ವೇಜ್‌’ ಆಯ್ಕೆ ಮಾಡಿ. ಪಠ್ಯೇತರ ವಿಷಯಗಳಲ್ಲಿ ಹೊಸ ಪೋಸ್ಟ್‌ಗಳು, ಭಾಷೆಗೆ ಸಂಬಂಧಿಸಿದ ಆನ್‌ಲೈನ್‌ ಧ್ಯಾನದ ಸಮಯಗಳು, ಮಾರ್ಗದರ್ಶಿತ ಧ್ಯಾನಗಳು, ವಾರದ ಸತ್ಸಂಗಗಳು, ಗೀತಾ ಪ್ರವಚನಗಳು, ಸಂಗಂಗಳು ಮತ್ತು ಕಾನ್ವೋಕೇಷನ್‌ಗಳ ಸತ್ಸಂಗಗಳು ಸೇರಿವೆ.

ಪಾಠಗಳ ಭಾಷೆ: ಎಸ್‌ಆರ್‌ಎಫ್‌/ವೈಎಸ್‌ಎಸ್‌ ಅಪ್ಲಿಕೇಶನ್ ಪ್ರಸ್ತುತ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ಯಾವುದೇ ಭಾಷೆಯಲ್ಲಿ ನೋಡಲು, ಒಬ್ಬರು ಮೊದಲು ಪಾಠಗಳ ವಿದ್ಯಾರ್ಥಿಯಾಗಿ ದಾಖಲಾಗಿರಬೇಕು (ದಯಮಾಡಿ ಹೆಚ್ಚಿನದನ್ನು ತಿಳಿಯಲು ಇಲ್ಲಿ ಒತ್ತಿ). ಆಪ್‌ನಲ್ಲಿ ‘ಫಾರ್‌ ಮಿ’ ವಿಭಾಗಕ್ಕೆ ಹೋಗಿ ಪಾಠಗಳ ಭಾಷೆ ಯನ್ನು ಆಯ್ಕೆ ಮಾಡಿಕೊಂಡು ‘ಪಾಠಗಳ ಭಾಷೆಯನ್ನು’ ಆಯ್ದುಕೊಳ್ಳಬಹುದು.

para-ornament

ಪಾಠಗಳ ಚಂದಾ, ಲಾಗಿಂಗ್‌ ಇನ್‌, ಮತ್ತು ಅತಿಥಿ ಮಾರ್ಗ

ಆಪ್‌ನಲ್ಲಿ ನಾನು ನನ್ನ ಪಾಠಗಳನ್ನು ನೋಡಲಾಗುತ್ತಿಲ್ಲ, ಏಕೆ?

  • ಲಾಗಿನ್‌ ಆಗಲು ಮತ್ತು ವಿಷಯಗಳನ್ನು ನೋಡಲು ನೀವು ಆನ್‌ಲೈನ್‌ನಲ್ಲಿ ಇದ್ದೀರ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
  • ನೀವು ನೋಡ ಬಯಸುವ ನಿರ್ದಿಷ್ಟ ಸರಣಿಗೆ ನೀವು ದಾಖಲಾತಿ ಮಾಡಿಕೊಂಡಿದ್ದೀರಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಮೂಲ ಸರಣಿ ಮತ್ತು ಪೂರಕ ಸರಣಿ ಪ್ರತ್ಯೇಕ ದಾಖಲಾತಿಗಳಾಗಿವೆ.
  • ಆಪ್‌ ಪಾಠಗಳ ಹೊಸ ಆವೃತ್ತಿಯನ್ನು ನೋಡುವುದಕ್ಕೆ ಮಾತ್ರ ಅವಕಾಶವನ್ನು ನೀಡುತ್ತದೆ. ನೀವು ಪಾಠಗಳ ಹೊಸ ಆವೃತ್ತಿಗೆ ಚಂದಾದಾರರಾಗಿಲ್ಲದಿದ್ದಲ್ಲಿ, ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
  • ನೀವು ನಿಮ್ಮ ಪಾಸ್‌ವರ್ಡ್‌ ಅನ್ನು ಮರೆತಿದ್ದಲ್ಲಿ, ಲಾಗಿನ್‌ ಸ್ಕ್ರೀನ್‌ ಮೇಲೆ ಇರುವ ‘ಫರ್‌ಗಾಟ್‌ ಪಾಸ್‌ವರ್ಡ್‌?’ ಒತ್ತಿ.
  • ಇನ್ನೂ ನಿಮಗೆ ಸಮಸ್ಯೆ ಇದ್ದಲ್ಲಿ, ನಮ್ಮ ಸಹಾಯಕ ಕಕ್ಷೆಯನ್ನು ಸಂಪರ್ಕಿಸಲು ಆಪ್‌ನ ‘ಫಾರ್‌ ಮಿ’ ಪುಟದಲ್ಲಿರುವ ‘ಸಪೋರ್ಟ್‌’ ಗುಂಡಿಯನ್ನು ಉಪಯೋಗಿಸಿ. ಇದು ನಾವು ನಿಮಗೆ ಉತ್ತಮವಾಗಿ ಸಹಾಯ ಮಾಡಲು ಸಾಧ್ಯವಾಗಿಸುತ್ತದೆ. ನೀವು ಆಪ್‌ ಅನ್ನು ಇನ್ಸ್ಟಾಲ್‌ ಮಾಡಿಕೊಳ್ಳಲು ಆಗದಿದ್ದಲ್ಲಿ, ದಯಮಾಡಿ apptechsupport@yogananda-srf.org ಇಮೇಲ್‌ ಮಾಡಿ ಮತ್ತು ನಿಮ್ಮ ಸಮಸ್ಯೆಯನ್ನು ವಿವರವಾಗಿ ತಿಳಿಸಿ. ನಿಮ್ಮ ಖಾತೆಗೆ ಸಂಭಂದಿಸಿದ ನಿಮ್ಮ ಹೆಸರು ಮತ್ತು ಇಮೇಲ್‌ ವಿಳಾಸವನ್ನು ಇದರಲ್ಲಿ ಸೇರಿಸುವುದನ್ನು ದಯವಿಟ್ಟು ಮರೆಯಬೇಡಿ.

ನಾನು ಆಪ್‌ನಲ್ಲಿ ಪಾಠಗಳನ್ನು ಯಾವಾಗ ಓದಬಹುದು?

ಒಂದು ನಿರ್ದಿಷ್ಟ ಪಾಠ ಆಪ್‌ನಲ್ಲಿ ಇಲ್ಲದೇ ಇದ್ದಲ್ಲಿ, ಅದು ಲಭ್ಯವಾಗುವ ದಿನಾಂಕವನ್ನು ಸೂಚಿಸಲಾಗುತ್ತದೆ.

ನಾನು ಇಂಗ್ಲಿಷ್ ಮತ್ತು ಹಿಂದಿ (ಅಥವಾ ತಮಿಳು/ತೆಲುಗು/ಕನ್ನಡ) ಪಾಠಗಳಿಗೆ ಚಂದಾದಾರನಾಗಿದ್ದೇನೆ, ಆದರೆ ನನಗೆ ಇಂಗ್ಲಿಷ್ ಪಾಠಗಳು ಮಾತ್ರ ಕಾಣಿಸುತ್ತಿವೆ. ನಾನು ಹಿಂದಿ (ಅಥವಾ ತಮಿಳು/ತೆಲುಗು/ಕನ್ನಡ) ಪಾಠಗಳನ್ನು ಹೇಗೆ ಪ್ರವೇಶಿಸುವುದು?

ಪಾಠಗಳ ಭಾಷೆ ವಿಭಾಗವನ್ನು ನೋಡಿ.

para-ornament

ವಿಭಿನ್ನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಮತ್ತು ತೊಂದರೆಗಳನ್ನು ಸರಿಪಡಿಸಿಕೊಳ್ಳುವುದು

ಪಾಠಗಳ ಇರೀಡರ್‌

ಬುಕ್‌ಮಾರ್ಕ್ಸ್‌ ಮತ್ತು ಹೈಲೈಟ್ಸ್‌

ಪಾಠಗಳ ಪಠ್ಯದಲ್ಲಿ 4 ವಿವಿಧ ಬಣ್ಣಗಳಲ್ಲಿ ಹೈಲೈಟ್‌ ಮಾಡಲು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಶಬ್ದಗಳನ್ನು ಆಯ್ಕೆ ಮಾಡಿ. ಎರಡು ಶಬ್ದಕ್ಕಿಂತ ಹೆಚ್ಚಿಗೆ ಆಯ್ಕೆ ಮಾಡಿದ್ದಲ್ಲಿ, ನೀವು ಕಡೆಯದಾಗಿ ಉಪಯೋಗಿಸಿದ ಬಣ್ಣದಲ್ಲಿ ಆಯ್ಕೆಯನ್ನು ತಾನೇ ತಾನಾಗಿ ಹೈಲೈಟ್‌ ಮಾಡುತ್ತದೆ. ಇನ್‌-ರೀಡರ್‌ ಮೆನುನಲ್ಲಿ ಪ್ರಸ್ತುತ ಪಾಠದ ನೀವು ಮಾಡಿರುವ ಬುಕ್‌ಮಾರ್ಕ್ಸ್‌ ಮತ್ತು ಹೈಲೈಟ್‌ಗಳು ಪ್ರದರ್ಶಿತವಾಗುತ್ತವೆ (ಬಲಗಡೆ ಮೇಲಿರುವ ಮೆನು ಐಕಾನ್‌ ಅನ್ನು ಒತ್ತಿ). ಎಲ್ಲ ಪಾಠಗಳಿಂದ ನಿಮ್ಮ ಬುಕ್‌ಮಾರ್ಕ್ಸ್‌ ಮತ್ತು ಹೈಲೈಟ್‌ಗಳನ್ನು ನೋಡಲು, ‘ಫಾರ್‌ ಮಿ’ ವಿಭಾಗಕ್ಕೆ ಹೋಗಿ, ‘ಬುಕ್‌ಮಾರ್ಕ್ಸ್‌ ಅಂಡ್‌ ಹೈಲೈಟ್ಸ್‌’ ಆಯ್ಕೆ ಮಾಡಿ. ಎಲ್ಲ ಬುಕ್‌ಮಾರ್ಕ್‌ಗಳು ಮತ್ತು ಹೈಲೈಟ್‌ಗಳು ನಿಮ್ಮ ವಿವಿಧ ಸಾಧನಗಳ ಮೇಲೆ ಸಮ್ಮಿಳನವಾಗುತ್ತವೆ (ಸಿಂಕ್‌ ಆಗುತ್ತವೆ).

ಪಾಠಗಳ ಸಹಾಯಕ ವಸ್ತುವಿಷಯಗಳನ್ನು ಪಡೆಯುವುದು

ನಿರ್ದಿಷ್ಟ ಪಾಠವನ್ನು ಆಯ್ಕೆ ಮಾಡಿಕೊಂಡು ‘ಸಹಾಯಕ ವಸ್ತುವಿಷಯಗಳು’ ಬಟನ್‌ ಮೇಲೆ ಒತ್ತಿ. “ಪಕ್ಷಿನೋಟ,” “ಆತ್ಮ-ಸಾಕ್ಷಾತ್ಕಾರದ ಮೂಲಕ ಅತ್ಯುನ್ನತ ಸಾಧನೆಗಳು,” ಮತ್ತು “ಮುನ್ನುಡಿ”ಗಳಿಗೆ ಸಹಾಯಕ ವಿಷಯವಸ್ತುಗಳು ಇಲ್ಲ ಎಂಬುದನ್ನು ದಯಮಾಡಿ ಗುರುತುಮಾಡಿಕೊಳ್ಳಿ. ಪಾಠ 1ರಿಂದ ಮುಂದೆ ಸಹಾಯಕ ವಿಷಯವಸ್ತುಗಳು ಲಭ್ಯವಿವೆ.

ಪದದ ವೀಕ್ಷಣೆ (ವೈಎಸ್‌ಎಸ್‌ ಶಬ್ದಾರ್ಥ ಸಂಗ್ರಹ ಮತ್ತು ನಿಘಂಟಿನಿಂದ)

ಇರೀಡರ್‌ನಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಆಯ್ಕೆ ಮಾಡಿಕೊಂಡು ಕೆಳಭಾಗದ ಮೆನುನಲ್ಲಿರುವ ‘ಹೆಚ್ಚಿಗೆ ತಿಳಿಯಿರಿ’ ಒತ್ತಿ. ಇದು ವೈಎಸ್‌ಎಸ್‌ ಶಬ್ದಾರ್ಥ ಸಂಗ್ರಹ ಮತ್ತು ಸ್ಟ್ಯಾಂಡರ್ಡ್‌ ನಿಘಂಟಿನಿಂದ ಅರ್ಥವನ್ನು ತೋರಿಸಲು ಪ್ರಯತ್ನಿಸುತ್ತದೆ. ಹಲವಾರು ಪದಗಳನ್ನು ಆಯ್ಕೆ ಮಾಡಿದ್ದಲ್ಲಿ, ಆಯ್ಕೆಯಲ್ಲಿರುವ ಎಲ್ಲ ಶಬ್ದಾರ್ಥ ಸಂಗ್ರಹದಲ್ಲಿರುವ ಈ ಪದಗಳ ವಿವರಣೆಯನ್ನು ತೋರಿಸುತ್ತದೆ. ನಿಘಂಟಿನಲ್ಲಿರುವ ಅರ್ಥಕ್ಕಾಗಿ ಒಂದು ಬಾರಿಗೆ ಕೇವಲ ಒಂದು ಪದವನ್ನು ಆಯ್ಕೆ ಮಾಡಿ.

ಫ್ಲಾಷ್‌ಕಾರ್ಡ್‌ಗಳು (ಸೃಜನೆ ಮತ್ತು ಪರಿಶೀಲನೆ)

ಹೊಸ ವಿಚಾರಗಳನ್ನು ಕಲಿಯಲು ಫ್ಲಾಷ್‌ಕಾರ್ಡ್‌ಗಳ ಸೃಜನೆಯು ಈಗ ಒಂದು ಸಾಧನವಾಗಿ ಲಭ್ಯವಿದೆ. ಫ್ಲಾಷ್‌ಕಾರ್ಡನ್ನು ಸೃಜಿಸಲು ಇರೀಡರ್‌ನಿಂದ ವಾಕ್ಯದ ಒಂದು ಭಾಗವನ್ನು ಆರಿಸಿಕೊಳ್ಳಿ (ಅದು ವಾಕ್ಯದ ಭಾಗವನ್ನು ಎದ್ದು ಕಾಣುವಂತೆ ಮಾಡುತ್ತದೆ). ನಂತರ ಎದ್ದು ಕಾಣುವ ಭಾಗದ ಮೇಲೆ ಒತ್ತಿ ಮತ್ತು ಕೆಳಗೆ ಕಾಣುವ ‘ಕ್ರಿಯೇಟ್‌ ಫ್ಲಾಷ್‌ಕಾರ್ಡ್’ ಮೇಲೆ ಒತ್ತಿ. ಇದು ನಿಮ್ಮ ಫ್ಲಾಡ್‌ಕಾರ್ಡಿನ “ವಿವರಣೆಯನ್ನು” ಸೃಷ್ಟಿಸುತ್ತದೆ. ಹೊಸ ಫ್ಲಾಷ್‌ಕಾರ್ಡ್‌ ನ ಸೃಜನೆಯನ್ನು ಪೂರ್ಣಗೊಳಿಸಲು ಅದಕ್ಕೊಂದು ‘ಹೆಸರ’ನ್ನು ಮತ್ತು ಬಣ್ಣವನ್ನು ಕೊಡಿ. ನೀವು ಸೇವ್‌ ಮಾಡಿದ ಎಲ್ಲ ಫ್ಲಾಷ್‌ಕಾರ್ಡ್‌ಗಳು ಆಪ್‌ನ ‘ಫಾರ್‌ ಮಿ’ ವಿಭಾಗದಲ್ಲಿ ಕಾಣಸಿಗುತ್ತದೆ.

ಟೆಕ್ಸ್ಟ್‌-ಟು-ಸ್ಪೀಚ್‌ (ಟಿಟಿಎಸ್‌) ಕೆಲಸ ಮಾಡುತ್ತಿಲ್ಲ

ಟೆಕ್ಸ್ಟ್‌-ಟು-ಸ್ಪೀಚ್‌ (ಟಿಟಿಎಸ್‌) ಹೊಂದಿಕೆಯಾಗುವ ಸಾಧನಗಳನ್ನು ಮಾತ್ರ ಬೆಂಬಲಿಸುತ್ತದೆ. ಬೆಂಬಲವು ಭಾಷೆಗೆ ತಕ್ಕಂತೆ ಬದಲಾಗುತ್ತದೆ, ಉದಾಹರಣೆಗೆ: ತಮಿಳಿನಲ್ಲಿರುವ ಟಿಟಿಎಸ್‌ ಅನ್ನು ಐಓಎಸ್‌ ಬೆಂಬಲಿಸುವುದಿಲ್ಲ.

ಕೆಲವು ಆಂಡ್ರಾಯ್ಡ್‌ ಸಾಧನಗಳ ಮೇಲೆ (ಸ್ಯಾಮ್ಸಂಗ್‌ನಂತಹವು), ಮೊದಲ ಆಯ್ಕೆ (ಅಥವಾ ಆದ್ಯತೆ)ಯ ಸ್ಪೀಚ್‌ ಎಂಜಿನ್‌ ಅನ್ನು ‘ಸ್ಪೀಚ್‌ ಸರ್ವೀಸಸ್‌ ಬೈ ಗೂಗಲ್‌’ಗೆ ಅಳವಡಿಸಿರುವುದನ್ನು ಖಚಿತ ಪಡಿಸಿಕೊಳ್ಳಿ.

ಟಿಟಿಎಸ್‌ ಮಾತನಾಡುವ ಧ್ವನಿಯನ್ನು ಬದಲಾಯಿಸುವುದು

ಕೇಳಿಸಿಕೊಳ್ಳುವ ವಿಧಾನದಲ್ಲಿರುವಾಗ, ಆಡಿಯೋ ಪ್ಲೆಯರ್‌ ಸೂಚಿಯ ಎಡಭಾಗದ ಕೆಳಗಿನ ಮೂಲೆಯಲ್ಲಿರುವ ಸ್ಪೀಚ್‌ ಐಕಾನನ್ನು ಒತ್ತಿ. ಇದು ನಿಮ್ಮ ಸಾಧನದಲ್ಲಿರುವ ಎಲ್ಲ ಲಭ್ಯ ಧ್ವನಿಗಳನ್ನು ನಿಮಗೆ ತೋರಿಸುತ್ತದೆ.

ಮಾಡ್ಯೂಲ್‌ (ವಿಷಯಾನುಸಾರವಾಗಿ) ಅನ್ನು ಆಧರಿಸಿ ಪೂರಕ ಪಾಠಗಳನ್ನು ನೋಡುವುದು

ಮೂಲ ಪಾಠದ ಸರಣಿಯನ್ನು ಪೂರೈಸಿದ ವಿದ್ಯಾರ್ಥಿಗಳು (ಪಾಠಗಳು 1-18) ಪೂರಕ ಸರಣಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. ‘ಪೂರಕ ಪಾಠಗಳು’ ಟ್ಯಾಬ್‌ ಆಯ್ಕೆ ಮಾಡಿಕೊಂಡು ಪೂರಕ ಪಾಠಗಳನ್ನು ವಿಷಯಾನುಸಾರವಾಗಿ ಓದಲು ‘ಮಾಡ್ಯೂಲ್ಸ್‌’ ಮೇಲೆ ಒತ್ತಿ. ಒಮ್ಮೆ ನೀವು ಪೂರಕ ಸರಣಿಯನ್ನು ಆರಂಭಿಸಿದ ಮೇಲೆ, ಹೊಸ ಪಾಠಗಳು ನಿಮಗೆ ಎರಡು ವಾರಕ್ಕೊಮ್ಮೆ ಸಿಗುತ್ತವೆ.

ಆನ್‌ಲೈನ್‌ ಧ್ಯಾನಗಳು

ಆನ್‌ಲೈನ್‌ ಧ್ಯಾನಗಳಿಗೆ ಪ್ರತ್ಯಕ್ಷವಾಗಿ ಸೇರುವುದು

ಆಪ್‌ನ ‘ಧ್ಯಾನ ಮಾಡಿ | ಆನ್‌ಲೈನ್‌’ ವಿಭಾಗದಲ್ಲಿ, ಮುಂಬರುವ ಧ್ಯಾನಗಳನ್ನು ಪಟ್ಟಿಮಾಡಲಾಗುತ್ತದೆ. ನಿರ್ಧಾರಿತ ಆರಂಭದ ಸಮಯವು ಬಂದಾಗ, ಜೂಮ್‌ ಅಥವಾ ಯುಟ್ಯೂಬ್‌ ಮುಖಾಂತರ ನೀವು ಧ್ಯಾನಕ್ಕೆ ಸೇರಿಕೊಳ್ಳಬಹುದು. ‘ಸೇರಿಕೊಳ್ಳಿ’ ಗುಂಡಿಯ ಮೇಲೆ ಒತ್ತಿದಾಗ ಸೂಕ್ತ ಆಪ್‌ ಅನ್ನು ಪ್ರಾರಂಭಿಸುತ್ತದೆ (ಆಪ್‌ ಅನ್ನು ಈ ಮುಂಚೆಯೇ ನಿಮ್ಮ ಸಾಧನದ ಮೇಲೆ ಅಳವಡಿಸಿಕೊಂಡಿರಬೇಕು).

ಆನ್‌ಲೈನ್‌ ಧ್ಯಾನದ ಪಟ್ಟಿಯನ್ನು ಫಿಲ್ಟರ್‌ ಮಾಡುವುದು

ನಮ್ಮ ಆನ್‌ಲೈನ್‌ ಧ್ಯಾನ ಕೇಂದ್ರವು ವಿಭಿನ್ನ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ನೀವು ನಿರ್ದಿಷ್ಟ ರೀತಿಯದನ್ನು ಮಾತ್ರ ನೋಡಲು/ಸೇರಿಕೊಳ್ಳಲು ಇಚ್ಛಿಸಿದಲ್ಲಿ, ಮೇಲೆ ಬಲಭಾಗದಲ್ಲಿರುವ ‘ಫಿಲ್ಟರ್‌’ ಐಕಾನನ್ನು ಒತ್ತಿ ಕಾಣುತ್ತಿರುವ ವರ್ಗಗಳಲ್ಲಿ ನಿಮಗೆ ಇಚ್ಛೆಯಿರುವ ರೀತಿಯದನ್ನು ಆಯ್ದುಕೊಳ್ಳಿ. ನಿಮ್ಮ ಆಯ್ಕೆಯನ್ನು ಸೇವ್‌ ಮಾಡಿಕೊಳ್ಳಲು ‘ಅಪ್ಲೈ’ ಮೇಲೆ ಒತ್ತಿ.

ನಿರ್ದಿಷ್ಟ-ಭಾಷೆಯ ಆನ್‌ಲೈನ್‌ ಧ್ಯಾನದ ವೇಳಾಪಟ್ಟಿಯನ್ನು ನೋಡುವುದು

ನಿಮ್ಮ ಸಾಧನದ ಭಾಷೆಯನ್ನು ನಿಮಗೆ ಬೇಕಾದ ಭಾಷೆಗೆ ಹೊಂದಿಸಿದಾಗ, ಅಪ್ಲಿಕೇಶನ್ ಹೆಚ್ಚು ಭಾಷಾ-ನಿರ್ದಿಷ್ಟ ಕಾರ್ಯಕ್ರಮಗಳನ್ನು ತೋರಿಸುತ್ತದೆ. ಪ್ರಸ್ತುತ, ಇದು ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳನ್ನು ಮಾತ್ರ ಬೆಂಬಲಿಸುತ್ತದೆ.

ಮಾರ್ಗದರ್ಶಿತ ಧ್ಯಾನಗಳು

ಮಾರ್ಗದರ್ಶಿತ ಧ್ಯಾನಗಳನ್ನು ನೋಡುವುದು

ಆಪ್‌ನ ‘ಧ್ಯಾನ ಮಾಡಿ | ಮಾರ್ಗದರ್ಶಿತ’ ವಿಭಾಗದಲ್ಲಿ, ನೀವು ನಮ್ಮ ಸನ್ಯಾಸಿಗಳಿಂದ ಮಾರ್ಗದರ್ಶಿತವಾಗುವ ಧ್ಯಾನಗಳಲ್ಲಿ ಸೇರಿಕೊಳ್ಳಬಹುದು. ಮೊದಲು ಒಂದು ವಿಷಯನ್ನು ಆಯ್ಕೆ ಮಾಡಿಕೊಳ್ಳಿ, ನಂತರ ಆರಂಭಿಸುವ ಒಂದು ಅಪೇಕ್ಷಿತ ಅವಧಿ. ವೈಎಸ್‌ಎಸ್‌ ಧ್ಯಾನಪೀಠವನ್ನು ನೋಡಲು ನಿಮ್ಮ ಮೊಬೈಲ್‌ ಅನ್ನು ಲ್ಯಾಂಡ್‌ಸ್ಕೇಪ್‌ ಮೋಡ್‌ನಲ್ಲಿಡಿ.

ಮಾರ್ಗದರ್ಶಿತ ಧ್ಯಾನಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು

ಆಫ್‌ಲೈನ್‌ ಅಥವಾ ಬಾರಿ ಬಾರಿಯ ಉಪಯೋಗಕ್ಕಾಗಿ ಒಂದು ನಿರ್ದಿಷ್ಟ ಧ್ಯಾನವನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳಲು ಬಯಸಿದಲ್ಲಿ, ನಿಮ್ಮ ಪ್ಲೆಯರ್‌ನ ಕೆಳಗೆ ಬಲಭಾಗದಲ್ಲಿರುವ ‘ಡೌನ್‌ಲೋಡ್‌’ ಐಕಾನ್‌ ಮೇಲೆ ಒತ್ತಿ. ಮುಂದೆ ನೀವು ಅದೇ ಧ್ಯಾನಕ್ಕೆ ಮತ್ತೆ ಹೋದಾಗ, ಡೌನ್‌ಲೋಡ್‌ ಮಾಡಿದ ಫೈಲ್‌ ಅನ್ನು ಉಪಯೋಗಿಸಲಾಗುತ್ತದೆ.

ಇತರ ಭಾಷೆಗಳಲ್ಲಿಯ ಮಾರ್ಗದರ್ಶಿತ ಧ್ಯಾನಗಳು

ಮಾರ್ಗದರ್ಶಿತ ಧ್ಯಾನಗಳು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಲಭ್ಯವಿವೆ. ಇವುಗಳನ್ನು ಕೇಳಲು, ಹಾಗೆಯೇ, ಸುದ್ದಿ ಪ್ರಕಟಣೆಗಳು ಮತ್ತು ಭಾಷಾ-ನಿರ್ದಿಷ್ಟ ಆನ್‌ಲೈನ್ ಧ್ಯಾನ ವೇಳಾಪಟ್ಟಿಗಳಂತಹ ಎಲ್ಲಾ ಪಠ್ಯೇತರ ವಿಷಯಗಳನ್ನು ಪ್ರವೇಶಿಸಲು, ದಯವಿಟ್ಟು ನಿಮ್ಮ ಆಪ್‌ನ ಭಾಷೆಯನ್ನು ಹಿಂದಿ, ತಮಿಳು ಮತ್ತು ತೆಲುಗಿಗೆ ಬದಲಾಯಿಸಿಕೊಳ್ಳಿ.

ದಯವಿಟ್ಟು ಗಮನಿಸಿ: ಮಾರ್ಗದರ್ಶಿತ ಧ್ಯಾನಗಳು ಶೀಘ್ರದಲ್ಲೇ ಕನ್ನಡದಲ್ಲಿ ಲಭ್ಯವಾಗಲಿವೆ.

para-ornament

ಇನ್ನೂ ಸಹಾಯ ಬೇಕೆ?

ನಿಮ್ಮ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲಾಗುತ್ತಿಲ್ಲವೇ? ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ.

ನಮ್ಮ ಅಂತರರಾಷ್ಟ್ರೀಯ ಸ್ವಯಂಸೇವಕ ಸಹಾಯಕರಿಂದ ಸಹಾಯವನ್ನು ಪಡೆದುಕೊಳ್ಳಿ:

ಆಪ್‌ನ ‘ಫಾರ್‌ ಮಿ’ ವಿಭಾಗದಲ್ಲಿ, ದಯಮಾಡಿ ‘ಸಪೋರ್ಟ್‌’ ಮೇಲೆ ಒತ್ತಿ. ನಮ್ಮ ಸಹಾಯಕ ವರ್ಗದೊಡನೆ ಸಹಾಯವನ್ನು ಪಡೆಯಲು ಕೇಳಿದ ಮಾಹಿತಿಯನ್ನು ನೀಡಿ. ಸಮಸ್ಯೆಯ ಬಗ್ಗೆ ನೀವು ಹೆಚ್ಚು ಮಾಹಿತಿಯನ್ನು ನೀಡಿದಷ್ಟೂ, ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಸ್ಪಂದಿಸಲು ನಮಗೆ ಸುಲಭವಾಗುತ್ತದೆ.

ಸಹಾಯದ ವಿಂಡೋವನ್ನು ನೋಡಲು ನಿಮ್ಮ ಆಪ್‌ನಲ್ಲಿ ಸಾಧ್ಯವಾಗದಿದ್ದಲ್ಲಿ, ದಯಮಾಡಿ ಸಮಸ್ಯೆಯನ್ನು ವಿವರವಾಗಿ ತಿಳಿಸಿ, ನಿಮ್ಮ ಸಾಧನದ ಮಾಹಿತಿ ಮತ್ತು ನಿಮ್ಮ ವಿದ್ಯಾರ್ಥಿ ಖಾತೆಗೆ ಸೇರಿದ ನಿಮ್ಮ ಇಮೇಲ್‌ ಹೆಸರನ್ನು ನಮೂದಿಸಿ apptechsupport@yogananda-srf.org ಗೆ ಒಂದು ಇಮೇಲ್‌ ಕಳಿಸಿ.

para-ornament

ನಮ್ಮ ಇತ್ತೀಚಿನ ಸುಧಾರಣೆಗೆ ಮೆಚ್ಚುಗೆಯ ಮಾತುಗಳು

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ ಪಡೆದುಕೊಳ್ಳಿ

ಗೂಗಲ್‌ ಪ್ಲೇ ಅಥವಾ ಆಪಲ್‌ ಸ್ಟೋರ್‌ ನಿಂದ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ:

ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳು ವೈಎಸ್‌ಎಸ್‌ ಪಾಠಗಳನ್ನು ಮತ್ತು ಸಹಾಯಕ ವಸ್ತುವಿಷಯಗಳನ್ನು ಡೆಸ್ಕ್‌ಟಾಪ್‌ ಆಪ್‌ನಲ್ಲಿ ಕೂಡ ನೋಡಬಹುದು:

ಇದನ್ನು ಹಂಚಿಕೊಳ್ಳಿ